Pages

Tuesday, July 26, 2011

ಕುರ ಗಳಿತು ಒಡೆಯಲು ಒಳ್ಳೆ ಔಷಧಿ . . .

ಕುರದಿಂದ ನೋವನ್ನು ಅನುಭವಿಸುವ ಕೆಟ್ಟ ನೋವು ಮತ್ತೊಂದಿಲ್ಲ .. ಕುರ ಸರಿಯಾಗಿ ಗಳಿತು ಒಡೆದರೆ ಮತ್ತೆ ಬರುವುದಿಲ್ಲವಂತೆ . ಹಾಗಂತ ಒಮ್ಮೆ ಏನಾದರೂ ಸರಿಯಾಗಿ ಗಳಿಯದೆ ಒಡೆದರೆ ಮತ್ತೆ ಬರುವ ಸಂಭವವಿದೆ . ಪ್ರಾಕೃತಿಕವಾಗಿ ಕುರ ಗಳಿಯಲು ಅನೇಕ ದಿನ ಬೇಕು . ಅಲ್ಲಿಯವರೆಗಿನ ನೋವಿನ ಬೇನೆ ಬಹಳ ಕಷ್ಟ . ಕುರ ಗಳಿತು ಒಡೆದ ದಿನ ಮತ್ಹ್ತ್ಹೊಂದು ಜನ್ಮ ಪಡೆದ ಅನುಭವ !.
ಹಾಗಿದ್ದರೆ ನಾವು ಈಗ ಅಷ್ಟು ದಿನಗಳ ವರೆಗೆ ಕಾಯುವದು ಬೇಕಿಲ್ಲ .
ಉದ್ದಿನ ಬೆಲೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನಿನ್ನಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ ಬಿಡಿ. ಇದನ್ನು ಬೆಳಗ್ಗೆ ಒಮ್ಮೆ ರಾತ್ರೆ ಒಮ್ಮೆ ಮಾಡಿ ನೋಡಿ . ಮರುದಿನ ನಿಮ್ಮ ಕುರ ಪ್ರಾಕ್ರುಥಿಕವಾಗಿಯೇ ಬೆಳೆದು ಒಡೆದುಬಿಡುತ್ತದೆ. ನಿಮಗೆ ನಿಮ್ಮ ಕುರದ ಬೇನೆ ಒಂದು ಅಥವಾ ಎರಡು ದಿನದಲ್ಲಿ ಅಗೋಚರ . :)

-------------------------------------------------------------------------------

ಬಿಳಿ ಚಿಬ್ಬಿಗೆ

ಕೆಲವೊಮ್ಮೆ ನಮ್ಮ ಮೈಮೇಲೆ ಬಿಳಿ ಬಿಳಿಯಾಗಿ ಚಿಬ್ಬಿ ಇರುತ್ತದೆ . ಇದರಿಂದ ದುಷ್ಪರಿಣಾಮ ಏನೂ ಇಲ್ಲದಿದ್ದರೂ ಬಿಳಿ ಕಲೆಗಳು ನಮ್ಮನ್ನು ಅಸಹ್ಯಗೊಲ್ಲುವಂತೆ ಮಾಡುತ್ತದೆ .
ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ.
ಕಲ್ಲು ಶುಂಟಿ ಯನ್ನು ನಿಂಬೆ ಹಣ್ಣಿನೊಡನೆ ತ್ಯೇಯ್ದು ೫ ದಿನ ದಿನಕ್ಕೆರಡು ಬಾರಿಯಂತೆ ಹಚ್ಚಿ . ನಿಮ್ಮ ಮೈಮೇಲಿರುವ ಚಿಬ್ಬಿ ಮಂಗ ಮಾಯಾ .
- -------------------------------------

Thursday, June 9, 2011

ಹೊಟ್ಟೆ ಮುರಿತಕ್ಕೆ - ಬೇದಿಗೆ

ನಾವು ಅನೇಕ ಬಾರಿ ಹೊಟ್ಟೆ ಮುರಿತದ ಅನುಭವವನ್ನು ಬಹಳವಾಗಿ ಅನುಭವಿಸುತ್ತೇವೆ . ಇದು ಯಾವುದೇ ಆಹಾರ ತೊಂದರೆ ಆಗಿರಬಹುದು . ಅದರಲ್ಲೂ ನಮಗೆ ಎಲ್ಲಾದರೂ ಪ್ರಯಾಣ ಇರುವಾಗ ಈ ಹೊಟ್ಟೆ ಮುರಿತ ಪ್ರಯಾಣವನ್ನ ರದ್ದು ಗೊಳಿಸುವ ನಿರ್ಣಾಯಕ್ಕೆ ಎಡೆಮಾಡಿಕೊಡುತ್ತದೆ .


ಹೆದರುವ ಅವಶ್ಯಕತೆ ಇಲ್ಲ . ಕಾಡು ಅರಿಶಿನ ಅಥವಾ ಅರಾರೋಟನ್ನು ಒಂದು ಲೌಟ ಮಜ್ಜಿಗೆಗೆ ಹಾಕಿ ಕುಡಿದುಬಿಡಿನಿಮ್ಮ ಹೊಟ್ಟೆ ಮುರಿತ ಅಥವಾ ಬೇದಿಅನುಭವ ಬಂದ್ !!


- ಅಮರ ಕೆ ಜಿ ಕಾನುಗೋಡು .