Pages

Friday, December 17, 2010

ಹುಲ್ಕೂಡು ಗಣಪತಿ - ಎಲುಬು ಮುರಿತಕ್ಕೆ

ಸಾಗರ ತಾಲುಕ್ ಹುಲ್ಕೂಡು ಗಣಪತಿ ಇವರು ಎಲುಬು ಮುರಿತಕ್ಕೆ ಔಷಧಿಯನ್ನು ಕೊಡುತ್ತಾರೆ. ಕೈ ಕಾಲು ಹಾಗೂ ಇತರ ಎಲುಬು ಮುರಿತಕ್ಕೆ ಅತೀ ಉತ್ತಮವಾದ ಹಳ್ಳಿ ಔಷಧಿಯನ್ನ ಕೊಡುತ್ತಾರೆ . ಇವರು ಜಾನುವಾರಗಳಿಗೂ ಎಲುಬು ಮುರಿತಕ್ಕೆ ಔಷಧಿಯನ್ನ ಕೊಡುತ್ತಾರೆ.
ಊರು : ಸಾಗರ ತಾಲುಕ್ ಹುಲ್ಕೂಡು
ದೂರವಾಣಿ ಸಂಖ್ಯೆ : 08183 239978
--------------------------------------------------------------------------------------------

Thursday, December 16, 2010

ಶ್ರೀಮತಿ ಸಾವಿತ್ರಮ್ಮ , ದೊಡ್ಡೇರಿ -ಮಹಿಳೆಯರ ವೈಧ್ಯೆ

ಇವರ ಸುಮಾರು ನಲವತ್ತು ವರ್ಷಗಳ ಅನುಭವ ಬೆಚ್ಚಿ ಬೀಳಿಸುವಂತಹವು. ಮಕ್ಕಳನ್ನು ಪಡೆಯಲು ಎಲ್ಲಾ ದಂಪತಿಗಳಿಗೂ ಆಸೆ. ಆದರೆ ಕೆಲವೊಮ್ಮೆ ಅಸಾಧ್ಯ . ಇಂತಹ ಅನೇಕ ಸಮಸ್ಯೆ ಗಳಿಗೆ ಸಾವಿತ್ರಮ್ಮ ಔಷಧಿಯನ್ನ ಪರಿಪೂರ್ಣವಾಗಿ ಕೊಟ್ಟಿರುತ್ತಾರೆ . ಅವರು ತಾವು ಹಂಚಿಕೊಂಡ ತಮ್ಮ ಔಷಧಿಯ ಕಥೆಗಳು ಅಚ್ಚರಿಯಾಗಿತ್ತು .
ಅವರು ಮುಖ್ಯವಾಗಿ ಕೆಳಗೆ ತಿಳಿಸಿದವುಗಳಿಗೆ ಔಷಧಿಯನ್ನು ಕೊಡುತ್ತಾರೆ .
೧ ಬಂಜೆತನ ನಿವಾರಣೆಗೆ
೨ ಗಂಡಸರ ವೀರ್ಯಾಣು ಸಂಖ್ಯೆ ಹೆಚ್ಚಿಸಲು
೩ ಜಾಂಡಿಸ್
೪ ವೃತ್ತಿ ಹುಣ್ಣು - ಎಲ್ಲ ಬಗೆಯ ಲೂತಿ ಹುಣ್ಣು -ಸುಮಾರು ಮುಕ್ಕಾಲು ಭಾಗ ವಾಸಿಯಾಗುತ್ತದೆ
೫ ಮಕ್ಕಳ ಕೆಂಪಿನ ಕಜ್ಜಿ

ಊರು : ಸೊರಬ ತಾಲೂಕು ದೊಡ್ಡೇರಿ ಗ್ರಾಮ
ದೂರವಾಣಿ ಸಂಖ್ಯೆ : 08184 252529

ಶ್ರೀಯುತ ಡಿ ಆರ್ ಗಣಪತಿ, ದೊಡ್ಡೇರಿ. - ಗಂಟು ಕಸಕ್ಕೆ

ಸುಮಾರು ಮೂರು ತಲೆಮಾರಿನಿಂದ ಇವರ ಮನೆಯಲ್ಲಿ ಗಂಟು ಕಸಕ್ಕೆ ಔಷಧಿಯನ್ನ ಕೊಡುತ್ತಾ ಬಂದಿದ್ದಾರೆ. ಈ ತಲೆಮಾರಿನಲ್ಲಿ ಗಣಪತಿಯವರು ಸಾವಿರಾರು ಜನಗಳಿಗೆ ಔಷಧಿಯನ್ನು ಪರಿಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಕೊಟ್ಟಿರುತ್ತಾರೆ . ಇವರ ಅನುಭವದ ಮಾತುಗಳು ಅವರ ಔಷಧಿಯ ಪರಿಪೂರ್ಣತೆಯನ್ನು ಹೊರ ಹಾಕುತ್ತಿತ್ತು .
ಊರು : ಸೊರಬ ತಾಲೂಕ್ ದೊಡ್ಡೇರಿ
ದೂರವಾಣಿ ಸಂಖ್ಯೆ : 08184 252532

ಶ್ರೀ ಗಜಾನನ , ಮಂಚಾಲೆ

ಇವರು ಸಕ್ಕರೆ ಕಾಯಿಲೆಗೆ ಔಷಧಿ ಕೊಟ್ಟು ಪ್ರಸಿದ್ದರಾಗಿದ್ದಾರೆ . ಸಹಸ್ರಾರು ಜನರು ಇವರ ಔಷಧಿ ಪಡೆದು ಗುಣಮುಖರಾಗಿದ್ದಾರೆ . ಇವರು ಸಾಮಾನ್ಯವಾಗಿ ಭಾನುವಾರ ಔಷಧಿಯನ್ನು ಕೊಡುತ್ತಾರೆ. ಸಕ್ಕರೆ ಕಾಯಿಲೆ ಅಲ್ಲದೆ ಇವರು ಇನ್ನೂ ಹತ್ತು ಹಲವಾರು ಕಾಯಿಲೆಗಳಿಗೆ ಔಷಧಿಯನ್ನು ಕೊಡುತ್ತಾರೆ . ಕೆಲವನ್ನು ಇಲ್ಲಿ ಕೆಳಗೆ ಬರೆಯಲಾಗಿದೆ.
೧ ಸಕ್ಕರೆ ಕಾಯಿಲೆ
೨ ಗಾಂಗರಿನ್
೩ ಗ್ಯಾಸ್ಟ್ರಿಕ್
೪ ಶೀಥದ ಅಲರ್ಜಿ
೫ ಚರ್ಮದ ರೋಗಗಳು
೬ ಮಹಿಳೆಯರ ಕಾಯಿಲೆಗಳು
೭ ಬಂಜೆತನಕ್ಕೆ
೮ ಎಲ್ಲ ರೀತಿಯ uterous related eseases
ಊರು : - ಸಾಗರ ತಾಲೂಕು ಮಂಚಾಲೆ ಗ್ರಾಮ
ದೂರವಾಣಿ ಸಂಖ್ಯೆ : 08183 253 608 and 08183 295698

ಹಲ್ಲು ನೋವಿಗೆ

ಸಾಗರ ತಾಲುಕ್ ಕಾನುಗೋಡು ಗ್ರಾಮದ ಕೆ ಎಲ್ ರಮೇಶ , ಹಲ್ಲು ನೋವಿಗೆ ಔಷಧಿ ಕೊಡುವವರಲ್ಲಿ ಒಬ್ಬರು. ಅವರು ಹಲ್ಲಿಗೆ ಔಷಧಿಯನ್ನು ಬಿಟ್ಟು ಹಲ್ಲು ನೋವು ತೊಲಗುವಂತೆ ಮಾಡುವಲ್ಲಿ ಶಖ್ಯರು.
ದೂರವಾಣಿ ಸಂಖ್ಯೆ : - ೦೮೧೮೩ - 253563

ಹಾವು ಕಚ್ಚಿದರೆ

ಸಾಗರ ತಾಲೂಕಿನ ಗೆಣಸಿನ ಕುಣಿ ಹಾವು ಕಡಿದಾಕ್ಷಣ ನೆನಪಾಗುವ ಸ್ಥಳ. ಇಲ್ಲಿ ಸುಮಾರು ಎರಡು ತಲೆಮಾರಿನಿಂದ ಹಾವು ಕಡಿದವರಿಗೆ ಔಷಧಿ ಕೊಡಲಾಗುತ್ತದೆ. ಮೊದಲು ಗೆಣಸಿನ ಕುಣಿಯ ತಿಮ್ಮಪ್ಪ ಹೆಗಡೆಯವರು ಔಷಧಿಯನ್ನು ನೀಡುತ್ತಿದ್ದರು . ಈಗ ಅವರ ಮಕ್ಕಳಾದ ನಾಗಭೂಷಣ ಹೆಗಡೆ ಮತ್ತು ಕೇಶವ ಹೆಗಡೆ ಈ ಜವಾಬ್ದಾರಿಯನ್ನ ಕೊಂಡೊಯ್ಯುತ್ತಿದ್ದಾರೆ . ಹಾವು ಎಷ್ಟು ವಿಷಕರವಾದರೂ ಇವರ ಔಷಧಿಗೆ ಕೇವಲ ನೆಪ ಮಾತ್ರ .

ಹಾವು ಕಚ್ಚಿದಲ್ಲಿಂದ ಅರ್ಧ ಅಡಿ ದೂರದಲ್ಲಿ ಒಂದು ಸುತ್ತ ಕಟ್ಟು ಹೊಡೆಯಬೇಕು . ಅಂದರೆ ಹಾವು ಕಚ್ಚಿದಾಗ ಅದರ ವಿಷ ಇನ್ನೂ ಪಸರಿಸಬಾರದು ಎಂಬ ಅರ್ಥ ಇರಬಹುದು. ನಂತರ ಗೆಣಸಿನ ಕುಣಿಗೆ ದೂರವಾಣಿ ಕರೆ ಮಾಡಿ .

ಅಲ್ಲಿ ನೀಡುವ ಅವರ ಮಂತ್ರದ ನೀರಿನ ಔಷಧಿ ಎಂತವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ .

ಅವರ ದೂರವಾಣಿ ಸಂಖ್ಯೆ : 08183 - 237815