Pages

Friday, April 3, 2020

ತಂಬುಳಿ ತಂಬುಳಿ

whatsapp message:

*#*ತಂಬುಳಿ ತಂಬುಳಿ #* ಹವ್ಯಕ ರಿಗೆ ತಂಬ್ಳಿ ಇದ್ ಬಿಟ್ರೆ ಊಟ ಅಮೃತಕ್ಕೆ ಸಮಾನ.ಯಾರನ್ನಾದರೂ ಊಟಕ್ಕೆ ಕರುದಾದ್ರೆ ಒಂದ್ ಅನ್ನ- ತಂಬ್ಳಿ ಮಾಡ್ತೆ ಅಥವಾ ಅನ್ನ - ತಂಬ್ಳಿ ಉಂಡಕಂಡು ಹೋಗಲಕ್ಕು ಹೇಳಿ ಕರೆತೋ..ಕಡಿಮೆ ಸಾಮಗ್ರಿ ಲಿ ರುಚಿ ರುಚಿ ತಂಬ್ಳಿ ಮಾಡುಲಾಗ್ತು.ಅನ್ನಕ್ಕೆ ಮೊದಲು ಹಾಯ್ಕಂಡು ಉಣ್ಣೋ ತಂಬುಳಿ,ಕಡೆಗಣ್ ತಂಬ್ಳಿ ಹೇಳಿ ಎರಡು ಬಗೆ..ಮೊದಲು ಉಂಬುದಕ್ಕೆ ಹಸಿಮೆಣಸು ಅಥವಾ ಒಣಮೆಣಸಿನಕಾಯಿ ಒಗ್ಗರಣೆ ಕೊಡ್ತವಿಲ್ಲೆ.ಹಸಿದ ಹೊಟ್ಟೆಗೆ ತಂಪು ಆಗಲಿ ಹೇಳಿ ಹಿರಿಯರು ಮಾಡಿದ ಪದ್ಧತಿ..
*#ಮೊದಲು ಉಣ್ಣುವ ತಂಬ್ಳಿ #*
*೧. ಜೀರಿಗೆ*ಮೆಣಸಿನ ಕಾಳಿನ ತಂಬ್ಳಿ*:- ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬೇಕಿದ್ದರೆ ಚೂರು ಬೆಲ್ಲ ಹಾಕಿ.ಛಳಿಗಾಲ, ಮಳೆಗಾಲದ ಸಮಯದಲ್ಲಿ ಸ್ವಲ್ಪ ಬಿಸಿಮಾಡಿ ಊಟಮಾಡಿ.ಜ್ವರ ಬಂದಾಗ ಒಳ್ಳೆಯದು.
*೨. ಸಾಸಿವೆ*    *ತಂಬ್ಳಿ* :- ಕಾಯಿತುರಿ ಜೊತೆ ಸಾಸಿವೆ,ಚೂರು ಒಣಮೆಣಸಿನಕಾಯಿ ಹಾಕಿ ರುಬ್ಬಿ, ಮಜ್ಜಿಗೆ ಉಪ್ಪು ಹಾಕಿ. *ಅಜೀರ್ಣ ಆದಾಗ ಒಳ್ಳೆಯದು*
*೩. ಓಂಕಾಳು*. *ತಂಬ್ಳಿ*:- ಓಂಕಾಳು,ಚೂರು ಒಣಶುಂಠಿ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಹೊಟ್ಟೆ ಉಬ್ಬರ,ಆಮಶಂಕೆ ನಿವಾರಣೆಗೆ ಮನೆಮದ್ದು.
*೪. ಓಂಕಾಳು ಜೀರಿಗೆ ತಂಬುಳಿ* ಓಂಕಾಳು ಜೀರಿಗೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ವಾಂತಿ ಇರುವಾಗ ಈ ತಂಬ್ಳಿ ಉಪಯುಕ್ತ.
*೫. ಮೆಂತೆ ತಂಬ್ಳಿ* ಮೆಂತೆ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಸ್ವಲ್ಪ ಬೆಲ್ಲ ಹಾಕಿ.ಅಥವಾ ಒಣಮೆಣಸಿನಕಾಯಿಮ, ಮೆಂತೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಜೀರ್ಣಶಕ್ತಿ ವೃದ್ಧಿಸುತ್ತದೆ.
*೬.ಕೊತ್ತಂಬರಿ* *ತಂಬ್ಳಿ* ಕೊತ್ತಂಬರಿ ಬೀಜ ಇಂಗು ಕರಿಬೇವು ಒಣಮೆಣಸಿನಕಾಯಿ ಹುರಿದು ಕಾಯಿತುರಿ ಜೊತೆ ರುಬ್ಬಿ ಹುಣಸೆ ಹಣ್ಣು ಉಪ್ಪು ಹಾಕಿ.ಅಥವಾ ಕೊತ್ತಂಬರಿ ಬೀಜ ಇಂಗು ಕರಿಬೇವು ಹಸಿಮೆಣಸಿನ ಕಾಯಿ ಹುರಿದು ಕಾಯಿತುರಿ ಜೊತೆ ರುಬ್ಬಿ ಉಪ್ಪು ಹಾಕಿ.ಈ ತಂಬ್ಳಿ ಅವಲಕ್ಕಿ ಜೊತೆ ತುಂಬಾ ರುಚಿ.ಅನ್ನದ ಜೊತೆಗೂ ರುಚಿ.
*೭. ಕರಿಬೇವು  ತಂಬ್ಳಿ* ಕಾಯಿತುರಿ ಜೊತೆ ಕರಿಬೇವು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು..
*೮. ಎಲವರಿಗೆ  ತಂಬ್ಳಿ* ಎಲವರಿಗೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪ ಹಾಕಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಸ್ವಲ್ಪ ಬೆಲ್ಲ ಹಾಕಿ ದ್ರೂ ರುಚಿ.ಛಳಿಗಾಲ, ಮಳೆಗಾಲ ದಲ್ಲಿ ಸ್ವಲ್ಪ ಬಿಸಿಮಾಡಿ.ಬಿ .ಪಿ.ಇದ್ದವರಿಗೆ ಒಳ್ಳೆಯದು.
*೯. ವಿಟಾಮಿನ್ / ಚಕ್ರಮುನಿ ಸೊಪ್ಪು*#ತಂಬ್ಳಿ* ವಿಟಾಮಿನ್ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಚಳಿಗಾಲದಲ್ಲಿ ಮಳೆಗಾಲ ದಲ್ಲಿ ಬಿಸಿ ಮಾಡಿ ಉಣ್ಣಬಹುದು.
*೧೦. ಬಿಲ್ವಪತ್ರೆ ಕುಡಿ ತಂಬ್ಳಿ* :- ಕಾಯಿತುರಿ ಜೊತೆ ಬಿಲ್ವಪತ್ರೆ ಕುಡಿ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬಿಪಿ, ಶುಗರ್ ಇದ್ದವರಿಗೂ ಒಳ್ಳೆಯದು.
*೧೧ ನಿಂಬೆಕಾಯಿ  ತಂಬ್ಳಿ* :- ಕಾಯಿತುರಿ ಜೊತೆ ಕೊನೆಯ ಲ್ಲಿ ಲಿಂಬೆಹೋಳು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಜೀರಿಗೆ ಒಗ್ಗರಣೆ ಹಾಕಿ.
ಪಿತ್ತಕ್ಕೆ ಒಳ್ಳೆಯದು.
*೧೨ #ಒಂದೆಲಗದ (ಉರಗಾಗಡ್ಡೆ) ತಂಬ್ಳಿ* :- ಕಾಯಿತುರಿ ಜೊತೆ ಸ್ವಚ್ಛ ಮಾಡಿದ ಒಂದೆಲಗದ ಗಡ್ಡೆ ಸಹಿತ ಎಲೆಗಳು ಜೀರಿಗೆ ಕಾಳುಮೆಣಸು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಸ್ವಲ್ಪ ಬೆಲ್ಲ ಹಾಕಿ.ಇದು ಬೇಸಿಗೆಯಲ್ಲಿ ತಂಪು ಹಾಗೂ ನೆನಪಿನ ಶಕ್ತಿ ಹೆಚ್ಚಿಸಲು ಪರಿಣಾಮ ಬೀರುತ್ತದೆ.
*೧೩. ಬಿಳೆಕುಸುಮಾಲೆಹೂವಿನ #ತಂಬ್ಳಿ* :- ಬಿಳೆಕುಸುಮಾಲೆ ಹೂ, ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಹೆಂಗಸರ ಮುಟ್ಟಿನ ತೊಂದರೆಗೆ ಒಳ್ಳೆಯದು.
*೧೪ *ಪಾಲಕ್ ಸೊಪ್ಪು ತಂಬ್ಳಿ* :- ಪಾಲಕ್ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ದೇಹಕ್ಕೆ ತಂಪು.
*೧೫ *#ಮೆಂತೆ #ಸೊಪ್ಪಿನ #ತಂಬ್ಳಿ*:- ಮೆಂತೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬಾಯಿರುಚಿ ಹೆಚ್ಚಿಸುತ್ತದೆ. *೧೭ ಸಬ್ಬಸಿಗೆ ಸೊಪ್ಪಿನ ತಂಬ್ಳಿ*:- ಸಬ್ಬಸಿಗೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. 
*ಬಸುರಿ ಹಾಗೂ ಬಾಣಂತಿ ಯರಿಗೆ ಎದೆಹಾಲು ಹೆಚ್ಚಿಸಲು ಪರಿಣಾಮ ಕಾರಿ*.
*೧೮ ಕಂಚಿಕಾಯಿ ,#ಹೇರಳೆ ಕಾಯಿ (ಉಪ್ಪಲ್ಲಿ ಹಾಕಿದ ಕಂಚಿಹೋಳು) ತಂಬ್ಳಿ* :- ಕಾಯಿತುರಿ ಜೊತೆ ಉಪ್ಪಲ್ಲಿ ಹಾಕಿದ ಕಂಚಿಹೋಳು ಹಾಕಿ ರುಬ್ಬಿ ಮಜ್ಜಿಗೆ ಉಪ್ಪು (ಉಪ್ಪು ಇರೋದ್ರಿಂದ ನೋಡಿ) ಹಾಕಿ. ಪಿತ್ತಕ್ಕೆ ಒಳ್ಳೆಯದು.
*೧೯ #ಲಿಂಬೆಸಟ್ಟಿನ (ರಸಹಿಂಡಿದ ಮೇಲೆ ಸಿಪ್ಪೆಯನ್ನು ಉಪ್ಪಲ್ಲಿ ಹಾಕಿದ) ತಂಬ್ಳಿ*:- ಕಾಯಿತುರಿ ಜೊತೆ ಲಿಂಬೆಸಟ್ಟು, ಜೀರಿಗೆ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ನೋಡಿ ಹಾಕಿ.ಪಿತ್ತಕ್ಕೆ ಒಳ್ಳೆಯದು.
*೨೦ ನೆಲ್ಲಿ ಕಾಯಿ ತಂಬುಳಿ* ಕಾಯಿತುರಿ ಜೊತೆ ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ನೆಲ್ಲಿ ಕಾಯಿ ಹಾಕಿ ಹುರಿದುಕೊಂಡು ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಪಿತ್ತಕ್ಕೆ ಒಳ್ಳೆಯದು. ಉಪ್ಪಲ್ಲಿ ಹಾಕಿದ ನೆಲ್ಲಿ ಕಾಯಿ ತಂಬುಳಿ ಮಾಡಬಹುದು. ನೀರಿನಲ್ಲಿ ನೆನೆಸಿ ನಂತರ ರುಬ್ಬಿ.
*೨೧ ಮುರುಗಲು ಹಣ್ಣಿನ ತಂಬ್ಳಿ* ಬೇಸಿಗೆಯಲ್ಲಿ ಧಾರಾಳ ಸಿಗುವ ಬಿಳೇ ಅಥವಾ ಕೆಂಪು ಮುರುಗಲು ಹಣ್ಣಿನ ಬೀಜ , ತೊಟ್ಟು ತೆಗೆದು ಕಾಯಿತುರಿ ಜೊತೆ ಜೀರಿಗೆ ಹಾಕಿ ರುಬ್ಬಿ , ಉಪ್ಪು, ಬೆಲ್ಲ ಹಾಕಿ.ಪಿತ್ತಶಮನಕಾರಿ.
*೨೨ ಒಣಗಿಸಿ ದ  ಮುರುಗಲು ಸಿಪ್ಪೆ ತಂಬ್ಳಿ*:- ಒಣಗಿದ ಬಿಳೇ ಅಥವಾ ಕೆಂಪು ಮುರುಗಲು ಹಣ್ಣಿನ ಸಿಪ್ಪೆ ಯನ್ನು ನೀರಲ್ಲಿ ನೆನೆಸಿಡಿ.ಕಾಯಿತುರಿ ಜೊತೆಗೆ ನೆನೆಸಿದ ಮು.ಸಿಪ್ಪೆ ರುಬ್ಬಿ ಉಪ್ಪು ಬೆಲ್ಲ ಹಾಕಿ.ಜೀರಿಗೆ ಒಗ್ಗರಣೆ ಹಾಕಿ.ಪಿತ್ತಕ್ಕೆ ಒಳ್ಳೆಯದು.
*೨೨* *ಕೆಂಪು / ಬಿಳಿ ದಾಸವಾಳ ಹೂವಿನ ತಂಬ್ಳಿ*:- ತೊಟ್ಟು, ಮಧ್ಯದ ಕುಸುಮ  ತೆಗೆದ ದಾಸವಾಳ ಹೂವು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ದೇಹವನ್ನು ತಂಪಾಗಿ ಇಡುತ್ತದೆ.
*೨೩* *ಮಾಚಿಪತ್ರೆ ತಂಬ್ಳಿ*:- ಮಾಚಿಪತ್ರೆ ಜೀರಿಗೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಜಂತು ನಾಶಕ್ಕೆ ಕಾರಣವಾಗುತ್ತದೆ.
*೨೪* *ಸಾಂಬಾರ್ ಸೊಪ್ಪಿನ (ದೊಡ್ಡ ಪತ್ರೆ) ತಂಬ್ಳಿ*:- ಸಾಂಬಾರ್ ಸೊಪ್ಪು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ನೆಗಡಿ ಆದಾಗ ಒಳ್ಳೆಯದು.
*೨೫* *#ಶುಂಠಿ ತಂಬ್ಳಿ*:- ಕಾಯಿತುರಿ ಜೊತೆ ಶುಂಠಿ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಜೀರ್ಣಕಾರಿ.
*೨೬. #ನೆಲನೆಲ್ಲಿ ತಂಬ್ಳಿ#* :- ನೆಲನೆಲ್ಲಿ ಸೊಪ್ಪಿನ ಜೊತೆ ಜೀರಿಗೆ ಹಾಕಿ ಹುರಿದು ತೆಂಗಿನ ತುರಿ ಹಾಕಿ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಕಾಮಾಲೆ ರೋಗಕ್ಕೆ ಮದ್ದು.
*೨೭ #ಕಾಕೆಸೊಪ್ಪಿನ ತಂಬ್ಳಿ #* ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಕಾಕೆಸೊಪ್ಪು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಬಾಯಿಹುಣ್ಣು ಆದಾಗ ಉಪಯುಕ್ತ.
*೨೮ # ಹೊನಗೊನೆ #ಸೊಪ್ಪಿನ ತಂಬ್ಳಿ* :- ಹೊನಗೊನೆ ಸೊಪ್ಪು ಜೀರಿಗೆ ಕಾಳುಮೆಣಸು ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
*೨೯. #ದಾಳಿಂಬೆ ಕುಡಿ ತಂಬ್ಳಿ* :- ದಾಳಿಂಬೆ ಕುಡಿ ಜೀರಿಗೆ ತುಪ್ಪದಲ್ಲಿ ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಪದೇ ಪದೇ ಮಲವಿಸರ್ಜನೆ ತೊಂದರೆಗೆ ಒಳಗಾಗಿರುವ ವರಿಗೆ ಒಳ್ಳೆಯದು.
*೩೦ #ಪೇರಲೆಕುಡಿ ತಂಬ್ಳಿ*:- ಪೇರಲೆ ಕುಡಿ, ಜೀರಿಗೆ ವ್ಯಯ ಚದರ ಹುರಿದು ಕಾಯಿತುರಿ  ರುಬ್ಬಿ ಮಜ್ಜಿಗೆ ಉಪ್ಪು ಹಾಕಿ.ಬಾಯಿಹುಣ್ಣು ಆದಾಗ ಒಳ್ಳೆಯದು.

Wednesday, April 3, 2013

ನೋವಿಗೊಂದು ಹಿತ್ತಲ ಮದ್ದು ..

ಕೆಲವೊಮ್ಮೆ ಬೆನ್ನು ಬಾಗ , ಕಾಲು , ಕೈ ಗಳು ಉಳುಕಿದಂತಾಗಿ ನೋವನ್ನು ಅನುಭವಿಸಲು ಬಹಳ ಕಷ್ಟವಾಗುತ್ತದೆ .  ನಿಂಬೆ ಹಣ್ಣನ್ನು ಎಣ್ಣೆಗೆ ಬೆರಸಿ (ನಾಲ್ಕು ಚಮಚ ನಿಂಬೆ ರಸಕ್ಕೆ ಒಂದು ಚಮಚ ಕೊಬರಿ ಎಣ್ಣೆ ) , ನಿಧಾನವಾಗಿ ನೋವಿರುವ ಜಾಗಕ್ಕೆ ಬೆರಸಿ. ನೋವಿಗೆ ಅತೀ ಬಹಳ ಉತ್ತಮ ಔಷದಿ .

Sunday, November 25, 2012

ಮಲಬದ್ದತೆ ತೊಂದರೆ ಇದ್ದವರಿಗೆ .....


ಸೋನಾಮುಖಿ ಸೊಪ್ಪನ್ನು ಎರಡು ಚಮಚದಷ್ಟು ಪ್ರಮಾಣಕ್ಕೆ ಮೂರು ಲೋಟ  ನೀರು ಸೇರಿಸಿ ಒಂದುಲೋಟ ಪ್ರಮಾಣಕ್ಕೆ ಕುದಿಸಿ ಬತ್ತಿಸಿ ಕಷಾಯ ಮಾಡಿ ರಾತ್ರಿ ಮಲಗುವಾಗ ಕುಡಿಯಬೇಕು. ಸೊಪ್ಪನ್ನು ಹೆಚ್ಚು ಪ್ರಮಾಣದಲ್ಲಿ ಸೇರಿಸಿಕೊಂಡರೆ ಬೇದಿಯಾಗುವ ಅಪಾಯವಿದೆ .

ಗ್ರಂದಿಗೆ ಅಂಗಡಿಯಲ್ಲಿ ಸೋನಾಮುಖಿ ಸೊಪ್ಪು ದೊರೆಯುತ್ತದೆ

ಸಲಹೆ : ಎಂ ಗಣಪತಿ ಕಾನುಗೋಡು

Wednesday, August 15, 2012

ಬಾಯಿಯ ದುರ್ವಾಸನೆಗೆ .....

ನಮ್ಮ ಬಾಯಿ ವಾಸನೆ ಬರ್ತಾ ಇದ್ರೆ .. ಪ್ರತಿ ದಿನ ಮಲಗುವ ಮುನ್ನ ಉಪ್ಪು ನೀರನ್ನು ಮುಕ್ಕಳಿಸಿ ಮಲಗಿದರೆ ನಮ್ಮ ಬಾಯಿಯ ವಾಸನೆ ಸುಗಂದಬರಿತವಾಗುತ್ತದೆ ...

Tuesday, July 26, 2011

ಕುರ ಗಳಿತು ಒಡೆಯಲು ಒಳ್ಳೆ ಔಷಧಿ . . .

ಕುರದಿಂದ ನೋವನ್ನು ಅನುಭವಿಸುವ ಕೆಟ್ಟ ನೋವು ಮತ್ತೊಂದಿಲ್ಲ .. ಕುರ ಸರಿಯಾಗಿ ಗಳಿತು ಒಡೆದರೆ ಮತ್ತೆ ಬರುವುದಿಲ್ಲವಂತೆ . ಹಾಗಂತ ಒಮ್ಮೆ ಏನಾದರೂ ಸರಿಯಾಗಿ ಗಳಿಯದೆ ಒಡೆದರೆ ಮತ್ತೆ ಬರುವ ಸಂಭವವಿದೆ . ಪ್ರಾಕೃತಿಕವಾಗಿ ಕುರ ಗಳಿಯಲು ಅನೇಕ ದಿನ ಬೇಕು . ಅಲ್ಲಿಯವರೆಗಿನ ನೋವಿನ ಬೇನೆ ಬಹಳ ಕಷ್ಟ . ಕುರ ಗಳಿತು ಒಡೆದ ದಿನ ಮತ್ಹ್ತ್ಹೊಂದು ಜನ್ಮ ಪಡೆದ ಅನುಭವ !.
ಹಾಗಿದ್ದರೆ ನಾವು ಈಗ ಅಷ್ಟು ದಿನಗಳ ವರೆಗೆ ಕಾಯುವದು ಬೇಕಿಲ್ಲ .
ಉದ್ದಿನ ಬೆಲೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನಿನ್ನಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ ಬಿಡಿ. ಇದನ್ನು ಬೆಳಗ್ಗೆ ಒಮ್ಮೆ ರಾತ್ರೆ ಒಮ್ಮೆ ಮಾಡಿ ನೋಡಿ . ಮರುದಿನ ನಿಮ್ಮ ಕುರ ಪ್ರಾಕ್ರುಥಿಕವಾಗಿಯೇ ಬೆಳೆದು ಒಡೆದುಬಿಡುತ್ತದೆ. ನಿಮಗೆ ನಿಮ್ಮ ಕುರದ ಬೇನೆ ಒಂದು ಅಥವಾ ಎರಡು ದಿನದಲ್ಲಿ ಅಗೋಚರ . :)

-------------------------------------------------------------------------------

ಬಿಳಿ ಚಿಬ್ಬಿಗೆ

ಕೆಲವೊಮ್ಮೆ ನಮ್ಮ ಮೈಮೇಲೆ ಬಿಳಿ ಬಿಳಿಯಾಗಿ ಚಿಬ್ಬಿ ಇರುತ್ತದೆ . ಇದರಿಂದ ದುಷ್ಪರಿಣಾಮ ಏನೂ ಇಲ್ಲದಿದ್ದರೂ ಬಿಳಿ ಕಲೆಗಳು ನಮ್ಮನ್ನು ಅಸಹ್ಯಗೊಲ್ಲುವಂತೆ ಮಾಡುತ್ತದೆ .
ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ.
ಕಲ್ಲು ಶುಂಟಿ ಯನ್ನು ನಿಂಬೆ ಹಣ್ಣಿನೊಡನೆ ತ್ಯೇಯ್ದು ೫ ದಿನ ದಿನಕ್ಕೆರಡು ಬಾರಿಯಂತೆ ಹಚ್ಚಿ . ನಿಮ್ಮ ಮೈಮೇಲಿರುವ ಚಿಬ್ಬಿ ಮಂಗ ಮಾಯಾ .
- -------------------------------------